ಭರಿತಾರ್ಪಣದ ಚೆನ್ನಬಸವಣ್ಣ - 

ಹನ್ನೆರಡನೆಯ ಶತಮಾನದ ವಚನಕಾರ. ಈತನ ಇತಿವೃತ್ತಗಳ ಬಗೆಗೆ ಯಾವ ಮಾಹಿತಿಯೂ ಉಪಲಬ್ಧವಿಲ್ಲ. ಈತನ ವಚನಗಳಲ್ಲಿ ಚೆನ್ನಬಸವಣ್ಣ, ಸಂಗನಬಸವಣ್ಣ, ಪ್ರಭು, ನಿಜಗುಣದೇವ ಇವರ ಉಲ್ಲೇಖವಿದೆ. ಈತನ ವಚನಗಳ ಅಂಕಿತ 'ಚನ್ನಕೂಡಲರಾಮೇಶ್ವರಲಿಂಗ.' ಸದ್ಯದಲ್ಲಿ ಈತನ ಹತ್ತು ವಚನಗಳು ಪ್ರಕಟವಾಗಿವೆ. ಫ. ಗು. ಹಳಕಟ್ಟಿ ಅವರು 'ಈತ ಅರ್ಪಣ ಮತ್ತು ಪ್ರಸಾದದ ರೀತಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದನು. ಅವನು ಈ ಬಗ್ಗೆ ಅನೇಕ ಮಹತ್ತ್ವದ ವಚನಗಳನ್ನು ರಚಿಸಿದ್ದಾನೆ ಎಂದಿದ್ದಾರೆ.
ಕಾಷ್ಟ ಪದಾರ್ಥವನರಿದು ಕರ್ಮಪದಾರ್ಥವ ಸೋಧಿಸಿಕೊಂಡು
ವರ್ಮ ಪದಾರ್ಥವ ನಿರ್ಧರಿಸಿ.

ಇಂತೀ ಪದಾರ್ಥಂಗಳ ಅರ್ಪಿಸುವಲ್ಲಿ ಬಂದ ಬಟ್ಟೆ ಮುಂದಣಪಯಣ
ದಿಂದ ಮಧ್ಯದಲ್ಲಿ ಕಾಂಬ ಸುಖಂಗಳ ಸಂದವಳಿದುದು ಭರಿತಾರ್ಷಣ
ಸಂದಿಗೊಂದಿಯ ಸಂಸಾರಗಳಲ್ಲಿ ಬೆಂಬಳಿಯಾಗಿಹುದೆ
ಅವರ ಮಂದಿರಂಗಳಲ್ಲಿ ಸ್ತುತಿನಿಂದ್ಯಾದಿಗಳ ತಂದುಕೊಳ್ಳದೆ
ಅವರಿಗೆ ಬಂಧ ಮೋಕ್ಷಕರ್ಮಂಗಳ ಭಾವಕ್ಕೆ ಸಂದನಿಕ್ಕದೆ 
ತಾ ಬಂಧನಲ್ಲದಿಪ್ಪುದೆ ಭರಿತಾರ್ಪಣ

ಇಂತೀ ನಿಹಿತವ ತಿಳಿದು ಸಂಸಾರ ಘಾತಕವ ಬಿಟ್ಟು
ಪರದೇಶಿಕತ್ವವಾದುದು ಭರಿತಾರ್ಷಣ

ಈ ಗುಣ ಚೆನ್ನ ಚನ್ನಕೂಡಲ ರಾಮೇಶ್ವರಲಿಂಗ ಸಂಗ
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ